Thursday, May 14, 2026
Google search engine
HomeKarnatakaRTI for Residential schools

RTI for Residential schools

*ಆರ್‌.ಟಿ.ಐ ಕಾಯ್ದೆಯು ವಸತಿ ಶಾಲೆಗೂ ಅನ್ವಯ : ಹೈಕೋರ್ಟ್*

ಬೆಂಗಳೂರು: ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ 2009ರ ಅಂಶಗಳು ವಸತಿ ಶಾಲೆಗೂ  ಅನ್ವಯವಾಗುತ್ತದೆ ಎಂದು ಎಂದು ಹೈಕೋರ್ಟ್  ಪ್ರಕರಣವೊಂದರಲ್ಲಿ    ಸ್ಪಷ್ಟವಾಗಿ  ತಿಳಿಸಿದೆ.  ಈ ಸಂಬಂಧವು ಮೈಸೂರಿನ ಜ್ಞಾನ ಸರೋವರ ಎಜುಕೇಶನ್ ಟ್ರಸ್ಟ್ ಸಲ್ಲಿಸಿದ ಅರ್ಜಿ ವಿಚಾರಣೆ ಮಾಡಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್  ಅವರಿದ್ದ  ಏಕಪೀಠ ಸದಸ್ಯ ನ್ಯಾಯ ಪೀಠ ಈ ಕುರಿತಂತೆ ಆದೇಶ ಹೊರಡಿಸಿದೆ.

ಸರ್ಕಾರದಿಂದ ಯಾವುದೇ ರೀತಿಯಲ್ಲಿ ಅನುದಾನ ಪಡೆಯದೆ ಐಸಿಎಸ್‌ಇ ಪಠ್ಯಕ್ರಮದ ಶಾಲೆ ಮುನ್ನಡೆಸುತ್ತಿರುವ ಜ್ಞಾನ ಸರೋವರ ಎಜುಕೇಶನ್ ಟ್ರಸ್ಟ್ ಆರ್ ಟಿ ಎ ಕಾಯ್ದೆಯಲ್ಲಿನ ನಿಯಮಗಳನ್ನು ಅನುಸರಣೆ ಮಾಡಿಲ್ಲ ಎಂಬ ಕಾರಣಕ್ಕೆ 1.61 ಕೋಟಿ ರೂ ದಂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿದ್ದ ಶಾಲೆಯು ಅರ್ಜಿಯನ್ನು ನ್ಯಾಯಪೀಠ ರದ್ದುಗೊಳಿಸಿದೆ.
ಪ್ರಕರಣವೇನೆಂದರೆ ” ಶಾಲೆಯು ಆರ್‌ಟಿಐ ಅಡಿಯಲ್ಲಿ ಮಾನ್ಯತೆ ಪಡೆದಿರುವುದಿಲ್ಲ. ಹಾಗಾಗಿ ಅದರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ  ಬಾಲಕೃಷ್ಣಪ್ಪ ಮತ್ತು ವಿಲಿಯಂ ಯೇಸುದಾಸ್ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿರುತ್ತಾರೆ.
ಇದನ್ನು ಪರಿಗಣಿಸಿ ಇಲಾಖೆ ಶಾಲೆಯ ಮುಖ್ಯಸ್ಥರಿಗೆ ನೋಟಿಸ್ ನೀಡಿತ್ತು.  ಆದರೆ ಶಾಲಾ ಆಡಳಿತ ಮಂಡಳಿ ಯಾರು ಹಾಜರು ಆಗಿರಲಿಲ್ಲ. ತದನಂತರ 2017 ಜನವರಿ 12ರಂದು ಶಿಕ್ಷಣ ಇಲಾಖೆ ಶಾಲೆಗೆ ಮತ್ತೊಂದು ಫೋಕಸ್ ನೋಟಿಸ್ ಜಾರಿ ಮಾಡಲಾಯಿತು. ಇದಕ್ಕೆ ಶಾಲಾ ಆಡಳಿತ ಮಂಡಳಿ  ‘ ನಮ್ಮದು ವಸತಿ ಶಾಲೆ ಆರ್‌ಟಿಐ  ಕಾಯ್ದೆಗೆ ಒಲಪಡುವುದಿಲ್ಲ ‘ ಎಂದು ಉತ್ತರ ನೀಡಿತು. ಇದಕ್ಕೆ ಪ್ರತಿಯಾಗಿ  ಆರ್ ಟಿ ಐ ಕಾಯ್ದೆಯನ್ನು ಉಲ್ಲಂಘನೆ ಮಾಡಿದೆ  ಎಂದು ಶಾಲೆಗೆ ದಂಡ ಹಾಕಿತು. ಇದನ್ನು ವಿರೋಧಿಸಿ ಶಾಲೆ ಹೈಕೋರ್ಟ್ ಮೆಟ್ಟಿಲೇರಿತು.

LEAVE A REPLY

Please enter your comment!
Please enter your name here

RELATED ARTICLES
- Advertisment -
Google search engine

Most Popular

Recent Comments