Saturday, April 18, 2026
Google search engine
HomeKarnatakaNEET Roll No Registration..

NEET Roll No Registration..

*ಆಗಸ್ಟ್ 5 ರಿಂದ ನೀಟ್ ರೋಲ್ ನಂಬರ್ ದಾಖಲಿಸಲು  ಅವಕಾಶ ಕಲ್ಪಿಸಿದ ಕೆಇಎ*

ಬೆಂಗಳೂರು: ಈ ಹಿಂದೆ  ಯುಜಿ – ಸಿಇಟಿ  ಗೆ ಅರ್ಜಿ ಸಲ್ಲಿಸಿರುವ, ನೀಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ತಮ್ಮ ನೀಟ್ ರೋಲ್ ನಂಬರ್ ದಾಖಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ ) ಇಂದು   ಸೋಮವಾರ ಲಿಂಕ್ ಬಿಡುಗಡೆ ಮಾಡಲಿದೆ.

ಆಗಸ್ಟ್ 5 ರಂದು  ಬೆಳಗ್ಗೆ 11 ಗಂಟೆಗೆ ಕೆಇಎ ವೆಬ್ ಸೈಟ್ ನಲ್ಲಿ ಯು. ಜಿ ನೀಟ್ -2024 ಲಿಂಕ್ ಬಿಡುಗಡೆ ಮಾಡಲಾಗುವುದು. ಆಗಸ್ಟ್ 7ರಂದು ಬೆಳಗ್ಗೆ 11 ರವರೆಗೆ ರೂಲ್ ನಂಬರ್ ದಾಖಲಿಸಬಹುದು ಎಂದು ಕೆಇಎ  ಕಾರ್ಯ ನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಮಾಹಿತಿಯನ್ನು ತಿಳಿಸಿದ್ದಾರೆ.

ಅಭ್ಯರ್ಥಿಗಳು ದಾಖಲಿಸುವ ರೋಲ್ ನಂಬರ್ ಅನ್ನು ಎನ್ ಟಿ ಎ ಡೇಟಾ ದೊಂದಿಗೆ ತಾಳೆ ಮಾಡಿ ಯುಜಿ ನೀಟ್ ಅರ್ಹತೆ ಪಡೆದಿದ್ದಲ್ಲಿ ಅರ್ಜಿನಮೂನೆ ಪ್ರತಿ ತೆಗೆದುಕೊಳ್ಳಲು ಅವಕಾಶ ನೀಡಲಾಗುತ್ತದೆ. ತದನಂತರ  ವೆರಿಫಿಕೇಷನ್ ಪತ್ರವನ್ನು  ಡೌನ್ಲೋಡ್ ಮಾಡಿಕೊಳ್ಳ ಬಹುದು  ಎಂದು ತಿಳಿಸಿದ್ದಾರೆ .

ಹೊಸದಾಗಿ ಅರ್ಜಿ ಸಲ್ಲಿಸಲು  ಆಗಸ್ಟ್ 7 ರಿಂದ ಅವಕಾಶ ಕಲ್ಪಿಸಲಾಗಿದೆ. ನೀಟ್ ಪರೀಕ್ಷೆಯಲ್ಲಿ  ಅರ್ಹತೆ ಹೊಂದಿದ್ದು,   ಇನ್ನು ಅರ್ಜಿ ಸಲ್ಲಿಸಿದವರು ಆಗಸ್ಟ್ 7 ರಿಂದ 9ರವರೆಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ  ಕೆಇಎ ವೆಬ್ಸೈಟ್ ವೀಕ್ಷಿಸಬಹುದು  ಎಂದು ಅವರು ಹೇಳಿದ್ದಾರೆ.

ಸಿದ್ದಾರ್ಥ
ವರ್ಲ್ಡ್ ಆಫ್ ಮೋಹನ್

LEAVE A REPLY

Please enter your comment!
Please enter your name here

RELATED ARTICLES
- Advertisment -
Google search engine

Most Popular

Jumma Mubarak

Bridge to Bangalore..

We the people…

Recent Comments