*ಕ್ರೇಜಿಸ್ಟಾರ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ*
ಬೆಂಗಳೂರು: ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಇಂದು (ಮೇ 30) ಜನ್ಮದಿನದ ಸಂಭ್ರಮ. ಬೆಂಗಳೂರಿನ ರಾಜಾಜಿನಗರದಲ್ಲಿ ರವಿಚಂದ್ರನ್ ನಿವಾಸದ ಮುಂದೆ ಅಭಿಮಾನಿಗಳು ಹಾರ, ಕೇಕ್ ಜೊತೆ ಶುಭಾಶಯಗಳನ್ನು ಕೋರಿದ್ದಾರೆ.
ರವಿಚಂದ್ರನ್ ಅವರು 1961 ಮೇ 30ರಂದು ತಮಿಳುನಾಡಿನ ವೆಲ್ಲೂರಿನಲ್ಲಿ ಜನಿಸಿದರು. ಡಾ. ರವಿಚಂದ್ರನ್ 1968ರಲ್ಲಿ ‘ಧೂಮಕೇತು’ ಚಿತ್ರದ ಮೂಲಕ ಬಾಲನಟನಾಗಿ ಚಿತ್ರರಂಗ ಆಗಮಿಸಿದರು . ಬಳಿಕ ಪ್ರೇಮಲೋಕ, ರಣಧೀರ, ಶಾಂತಿ ಕ್ರಾಂತಿ, ಯುಗಪುರುಷ, ಯುದ್ದಕಾಂಡ, ರಾಮಾಚಾರಿ, ಅಂಜದ ಗಂಡು, ಸ್ವಾಭಿಮಾನ, ನಾನು ನನ್ನ ಹೆಂಡ್ತಿ, ಮನೆದೇವ್ರು, ಗೋಪಿಕೃಷ್ಣ, ಬಣ್ಣದಗೆಜ್ಜೆ, ಶ್ರೀರಾಮಚಂದ್ರ,
ಕೋದಂಡರಾಮ, ಅಹಂ ಪ್ರೇಮಾಸ್ಮಿ, ಸಾಹುಕಾರ, ಹಠವಾದಿ, ಹೂ, ಅಪೂರ್ವ, ಹೀಗೆ ಅನೇಕ ಇತರೆ ಸಿನಿಮಾಗಳ ಮೂಲಕ ಪ್ರೇಕ್ಷಕರಿಗೆ ಪ್ರೀತಿ ಪ್ರೇಮದ ರಸದೌತಣ ನೀಡಿದ್ದಾರೆ.
ಇಂದಿನಿಂದ ಪ್ರೇಮಲೋಕ 2 ಸಿನಿಮಾದ ಶೂಟಿಂಗ್ ಆರಂಭ
ಇನ್ನು ರವಿಚಂದ್ರನ್ ಕೆರಿಯರ್ ಬದಲಿಸಿದ ಸಿನಿಮಾ ಅಂದರೆ 1987ರಲ್ಲಿ ತೆರೆಕಂಡ ಪ್ರೇಮಲೋಕ. ತಾವೇ ನಿರ್ದೇಶಿಸಿ, ನಟಿಸಿ ಗೆದ್ದಿದ್ದರು. ಈಗ ಪ್ರೇಮಲೋಕ ಪಾರ್ಟ್ 2 ಸಿನಿಮಾ ಮಾಡೋಕೆ ಮುಂದಾಗಿದ್ದಾರೆ. ಇಂದು ಮೇ 30 ರಿಂದ ಶೂಟಿಂಗ್ ಕೂಡ ಶುರುವಾಗಲಿದೆ. ಕಾರ್ಯಕ್ರವೊಂದರಲ್ಲಿ ಅತಿಥಿಯಾಗಿ ರವಿಚಂದ್ರನ್ ಭಾಗವಹಿಸಿದ್ದರು. ‘ಪ್ರೇಮಲೋಕ 2’ ಬಗ್ಗೆ ಮಾಹಿತಿ ನೀಡಿದ್ದಾರೆ.
ಇನ್ನು ಕಳೆದ ವಾರ ರವಿಚಂದ್ರನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ದಿ ಜಡ್ಜ್ಮೆಂಟ್ ಸಿನಿಮಾ ಬಿಡುಗಡೆಯಾಗಿತ್ತು. ಇದೀಗ ರವಿಮಾಮನ ಹುಟ್ಟುಹಬ್ಬದ ಪ್ರಯುಕ್ತ ಇಂದು ದಿ ಜಡ್ಜ್ಮೆಂಟ್ ಸಿನಿಮಾವನ್ನು ಕೇವಲ 90 ರೂಪಾಯಿ ನೀಡಿ ನೋಡುವ ಅವಕಾಶವನ್ನು ಕರ್ನಾಟಕದ ಪ್ರೇಕ್ಷಕರಿಗೆ ಚಿತ್ರತಂಡ ನೀಡಿದೆ.



