Thursday, May 14, 2026
Google search engine
HomeKarnatakaLiquid nitrogen ban

Liquid nitrogen ban

 

*ಆಹಾರ ಪದಾರ್ಥಗಳು ಹಾಗೂ ಸಿಹಿ – ತಿಂಡಿ ತಿನಿಸುಗಳಲ್ಲಿ   “ಲಿಕ್ವಿಡ್ ನೈಟ್ರೋಜನ್” ನಿಷೇಧ*

ಬೆಂಗಳೂರು: ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಸಿಹಿ- ತಿಂಡಿ ತಿನಿಸುಗಳು ಮತ್ತು ಆಹಾರ ಪದಾರ್ಥಗಳಲ್ಲಿ ಲಿಕ್ವಿಡ್ ನೈಟ್ರೋಜನ್ ಬಳಕೆಯನ್ನು  ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಸಂಪೂರ್ಣವಾಗಿ ನಿಷೇಧಿಸಿದೆ.
ಈ ಬಗ್ಗೆ ಇಲಾಖೆ ಆಯುಕ್ತರು ಪ್ರಕಟಣೆ ಹೊರಡಿಸಿದ್ದಾರೆ. ರಾಜ್ಯದ ಕೆಲವು ಪ್ರದೇಶಗಳಲ್ಲಿ ಆಹಾರ ಪದಾರ್ಥ ಸೇವನೆ ಸಂದರ್ಭ ವೇಳೆಯಲ್ಲಿ  ಲಿಕ್ವಿಡ್ ನೈಟ್ರೋಜನ್ ಬಳಕೆ ಯಥೇಚ್ಛವಾಗಿ ಮಾಡಲಾಗುತ್ತದೆ. ಆದರೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ನಿಯಮಗಳ ಪ್ರಕಾರದಂತೆ  ” ಲಿಕ್ವಿಡ್ ನೈಟ್ರೋಜನ್ ಅನ್ನು ಹೈನು ಉತ್ಪನ್ನ ಮತ್ತು ಐಸ್ ಕ್ರೀಮ್ ತಯಾರಿಕೆ ವೇಳೆಯಲ್ಲಿ ಮಾತ್ರ ಬಳಸಲು ಅನುಮೋದನೆ ಇದೆ ಎಂದು ತಿಳಿಸಲಾಗಿದೆ.
ಸಿಹಿ – ತಿಂಡಿ ತಿನಿಸುಗಳು ಮತ್ತು ಆಹಾರ ಪದಾರ್ಥಗಳ ಸೇವನೆ ಸಂದರ್ಭದಲ್ಲಿ ಲಿಕ್ವಿಡ್ ನೈಟ್ರೋಜನ್ ಉಪಯೋಗಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಕಳೆದ ದಿನಗಳ ಹಿಂದೆ ಇಲ್ಲಿನ 12 ವರ್ಷದ ಬಾಲಕಿಯೊಬ್ಬಳು ವಿವಾಹ ಸಮಾರಂಭದಲ್ಲಿ’ ಸ್ಮೋಕಿ ಪಾನ್ ‘ ಸೇವಿಸಿ ಪ್ರಾಣಪಾಯಕ್ಕೆ ತುತ್ತಾಗಿದ್ದಳು. ಬಳಿಕ ಅವಳ ಹೊಟ್ಟೆಯಲ್ಲಿ ರಂದ್ರದ ಕಾಣಿಸಿಕೊಂಡು , ನಾರಾಯಣ ಸ್ಪೆಷಲ್ ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ನೀಡಿದ್ದಾರೆ.

ಸಿದ್ದಾರ್ಥ
ವರ್ಲ್ಡ್ ಆಫ್ ಮೋಹನ್

LEAVE A REPLY

Please enter your comment!
Please enter your name here

Previous article
Next article
RELATED ARTICLES
- Advertisment -
Google search engine

Most Popular

Recent Comments