Thursday, May 14, 2026
Google search engine
HomeKarnatakaDarshan arrested..

Darshan arrested..

*ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ 10 ಮಂದಿ ಬಂಧನ*

ಬೆಂಗಳೂರು : ಕೊಲೆ ಕೇಸ್ ನಲ್ಲಿ ನಟ ದರ್ಶನ್ ರವರ ಆಪ್ತೆ  ಪವಿತ್ರ ಗೌಡ, ಪಟ್ಟಣಗೆರೆಯ ನಿವಾಸಿ  ವಿನಯ್  ಸೇರಿ ಹತ್ತು ಮಂದಿಯನ್ನು ಸ್ಥಳೀಯ ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಉಳಿದ  ಏಳು ಮಂದಿಯ ಹೆಸರು ಇನ್ನಷ್ಟೇ  ತಿಳಿಯಬೇಕಿದೆ.

ಶನಿವಾರ ಸಂಜೆ ಸುಮನಹಳ್ಳಿ  ಬ್ರಿಡ್ಜ್ ಬಲಿ ಮೃತ  ದೇಹ ಇದೆ ಎಂಬ  ಮಾಹಿತಿಯನ್ನು ಆಧರಿಸಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ಅನುಮಾನ ಬಂದ  ನಂತರ  ಕೊಲೆ ಪ್ರಕರಣ ದಾಖಲಿಸಿಕೊಂಡು  ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದರು. ಶನಿವಾರ ಸಂಜೆ ನಾಲ್ಕು ಜನ ಬಂದು ಪೊಲೀಸ್ ಠಾಣೆಯಲ್ಲಿ ಸ್ವಯಂ  ಶರಣಾಗಿದ್ದರು. ಅವರು ನೀಡಿದ ಮಾಹಿತಿಯನ್ನು ಆಧರಿಸಿ 6 ವ್ಯಕ್ತಿಗಳನ್ನು ಬಂಧಿಸಲಾಗಿತ್ತು. ಅವರಲ್ಲಿ ನಟ ದರ್ಶನ್, ಆಪ್ತೇ  ಪವಿತ್ರ ಗೌಡರವರು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪೋಲೋ ಫಾರ್ಮಸಿಯಲ್ಲಿ  ಕೆಲಸ ನಿರ್ವಹಿಸುತ್ತಿರುವ  ರೇಣುಕಾ ಸ್ವಾಮಿಯ ಅವರನ್ನು ಚಿತ್ರದುರ್ಗದಿಂದ  ನಗರಕ್ಕೆ ಕರೆತಂದಿದ್ದ ಆರೋಪಿಗಳು, ಪಟ್ಟಣಗೆರೆಯ ವಿನಯ್ ಕುಮಾರ್ ಶೆಡ್ ನಲ್ಲಿ ಕೂಡಿ ಹಾಕಿ  ಚಿತ್ರಹಿಂಸೆ ನೀಡಿ  ಹಲ್ಲೆ ನಡೆಸಿದ್ದರು. ತೀವ್ರ ಹಲ್ಲೆಯಿಂದ ಮೃತಪಟ್ಟ ರೇಣುಕಾ ಸ್ವಾಮಿ ಅವರ ಮೃತ ದೇಹವನ್ನು ಬ್ರಿಡ್ಜ್ ಬಳಿ ತಂದು ಎಸೆಯ ಲಾಗಿತ್ತು ಎಂದು ಹೇಳಲಾಗಿದೆ.
ನಟ ದರ್ಶನ್ ಆಪ್ತೆ ಪವಿತ್ರ ಗೌಡ ರವರಿಗೆ ಅಸಭ್ಯ ಮೆಸೇಜುಗಳನ್ನು ರೇಣುಕಾ ಸ್ವಾಮಿ ಕಳುಹಿಸಿದ್ದಾನೆ ಎಂಬ ಕಾರಣಕ್ಕೆ ಈ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರೇಣುಕಾ ಸ್ವಾಮಿ ಮೃತ  ದೇಹವನ್ನು ಎಸೆಯುವ ಸಂದರ್ಭದಲ್ಲಿ  ದರ್ಶನ್ ಹಾಗೂ  ಪವಿತ್ರ ಗೌಡರವರು  ಸ್ಥಳದಲ್ಲಿ ಇದ್ದರು. ಈ ಮಾಹಿತಿಯು ಸಿಸಿ ಟಿವಿಗಳಲ್ಲಿ ಸೆರೆಯಾಗಿದೆ. ಇದನ್ನ ಆಧರಿಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿದ್ದಾರ್ಥ
ವರ್ಲ್ಡ್ ಆಫ್ ಮೋಹನ್

LEAVE A REPLY

Please enter your comment!
Please enter your name here

RELATED ARTICLES
- Advertisment -
Google search engine

Most Popular

Recent Comments