Saturday, April 18, 2026
Google search engine
HomeKarnatakaCID Search for BSY..

CID Search for BSY..

*ಲೈಂಗಿಕ ಕಿರುಕುಳ ಪ್ರಕರಣದಲ್ಲಿ BSY ಬಂಧನಕ್ಕೆ ಸಿಐಡಿ ತೀವ್ರ ಹುಡುಕಾಟ*

17 ವರ್ಷದ ಬಾಲಿಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದ ಕೇಸಿನಲ್ಲಿ ಮಾಜಿ ಸಿಎಂ ಬಿಎಸ್ ವೈ ಯಡಿಯೂರಪ್ಪ ಬಂಧನಕ್ಕೆ ಜಾಮೀನು ರಹಿತ ವಾರೆಂಟ್ ಹೊರಡಿಸಲು ನ್ಯಾಯಾಲಯ ಆದೇಶಿಸಿದ ಬೆನ್ನಲ್ಲೇ ಆರೋಪಿಯ ಬಂಧನಕ್ಕೆ ಸಿಐಡಿ ತೀವ್ರ ಹುಡುಕಾಟ ನಡೆಸಿದೆ.

ಯಡಿಯೂರಪ್ಪ ಅವರಿಗೆ ಈ ಪ್ರಕರಣದಲ್ಲಿ ಬಂಧನದ ನೋಟಿಸ್ ನೀಡಿದ್ದ ಸಿಐಡಿ, ಜೂನ್ 12 ಹಾಜರಾಗುವಂತೆ ಸೂಚಿಸಿತ್ತು. ಜೂನ್ 17ರಂದು ಹಾಜರಾಗುವುದಾಗಿ ಪತ್ರದ ಮೂಲಕ ತಿಳಿಸಿ ಗೈರು ಹಾಜರಾಗಿದ್ದರು. ಯಡಿಯೂರಪ್ಪನವರು ದೆಹಲಿಯತ್ತ ಪ್ರಯಾಣ ಬೆಳೆಸಿರುವುದು ಗೊತ್ತಾಗುತ್ತ ಇದ್ದಂತೆಯೇ ಸಿಐಡಿ ಅಧಿಕಾರಿಗಳ ತಂಡ ಅವರ ಚಲನ – ವಲನಗಳ ಮೇಲೆ ಕಣ್ಣಿಟ್ಟಿತ್ತು. ದೆಹಲಿಯಲ್ಲಿರುವ ತಮ್ಮ ಮಗ ಸಂಸದ ಬಿ ವೈ ರಾಘವೇಂದ್ರ ಮನೆಯಲ್ಲಿದ್ದ ಯಡಿಯೂರಪ್ಪ, ಗುರುವಾರ ಬೆಳಿಗ್ಗೆ ಅಲ್ಲಿಂದ ಹೊರಟು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಅಲ್ಲಿಂದ ಹೊರಟುವರು ಇತರೆ ರಾಜ್ಯಗಳಿಗೆ ಹೋಗಿದ್ದಾರೆ ಎಂಬ ಮಾಹಿತಿ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇಂದು ಜಾಮೀನು ಅರ್ಜಿ
ಹೈಕೋರ್ಟ್ ನಲ್ಲಿ ಯಡಿಯೂರಪ್ಪ ಅವರು ನಿರೀಕ್ಷಣ ಜಾಮೀನು ಕೋರಿ ಹೈಕೋರ್ಟಿಗೆ ರಿಟ್ ಆರ್ಜಿ ಸಲ್ಲಿಸಿದ್ದು ಈ ಅರ್ಜಿ ಪ್ರಕಾರ ಜೂನ್ 14 ಮಧ್ಯಾಹ್ನ ಶಾಸಕರು – ಸಂಸದರ ವಿರುದ್ಧ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಪೀಠದಲ್ಲಿರುವ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರ ಮುಂದೆ ವಿಚಾರಣೆಗೆ ಅವಧಿ ನಿಗದಿಯಾಗಿದೆ. ಅಂತೆಯೇ ತಮ್ಮ ವಿರುದ್ಧದ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪೋಕ್ಸೋ ಪ್ರಕರಣ, ಅದನ್ನು ಕೋರಿ ಯಡಿಯೂರಪ್ಪ ಸಲ್ಲಿಸಿರುವ ಮತ್ತೊಂದು ಅರ್ಜಿಯು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರ ಈಗ ಸದಸ್ಯ ನ್ಯಾಯ ಪೀಠದ ಮುಂದೆ ವಿಚಾರಣೆಗೆ ಸಮಯ
ನಿಗದಿಯಾಗಿದೆ.

‘ಯಡಿಯೂರಪ್ಪನವರ ಡೆಲ್ಲಿ ಲೊಕೇಶನ್ ಪತ್ತೆ ಆಗುತ್ತಿಲ್ಲ ‘
ಸಿಐಡಿ ಕೊಟ್ಟಿರುವ ನೋಟಿಸ್ ಗೆ ಇದೆ 17ರವರೆಗೆ ಕಾಲಾವಕಾಶ ಕೇಳಿರುವ ಆರೋಪಿ ಯಡಿಯೂರಪ್ಪನವರ ಕೋರಿಕೆ ಅಪ್ರಮಾಣಿಕವಾಗಿದೆ. ಅವರು ಸಾಕ್ಷಾ ನಾಶ ಮಾಡಲು ಸಮಯ ಪಡೆಯುತ್ತಿರುವುದು ‘ ವಿಶೇಷ ಪಬ್ಲಿಕ್ ಪ್ರಾಸಿ ಕ್ಯೂಟರ್ ಅಶೋಕ್ ನಾಯಕ್ ಅವರು ನ್ಯಾಯಾಧೀಶರಿಗೆ ವಿವರಿಸಿದರು. ‘ ಅವರೀಗ ದೆಹಲಿಗೆ ಹೋಗಿದ್ದರೆ, ದೆಹಲಿಯಲ್ಲಿದ್ದಾರೆ ಎನ್ನಲಾಗುತ್ತಿದೆ . ಆದರೆ ದೆಹಲಿಯ ಲೊಕೇಶನ್ ಪತ್ತೆ ಆಗುತ್ತಿಲ್ಲ. ಕೂಡಲೇ ಅವರನ್ನು ಬಂಧಿಸಿ ವಿಚಾರಣೆ ನಡೆಸಬೇಕಿದೆ. ಇಲ್ಲವಾದಲ್ಲಿ ಸಾಕ್ಷ ನಾಶ ಮಾಡುವಲ್ಲಿ ಹೆಚ್ಚಿನ ಅವಕಾಶಗಳಿವೆ. ಆದ್ದರಿಂದ ಬಂಧನಕ್ಕೆ ಅನುಮತಿ ನೀಡಬೇಕೆಂದು ಕೋರಿದರು.

ಸಿದ್ದಾರ್ಥ
ವರ್ಲ್ಡ್ ಆಫ್ ಮೋಹನ್

LEAVE A REPLY

Please enter your comment!
Please enter your name here

Previous article
Next article
RELATED ARTICLES
- Advertisment -
Google search engine

Most Popular

Jumma Mubarak

Bridge to Bangalore..

We the people…

Recent Comments