*ರಾಜ್ಯದಾದ್ಯಂತ 5 ಕೋಟಿ ಸಸಿ ನೆಡಲು ಸಕಲ ಸಿದ್ಧತೆ : ಸಚಿವ ಈಶ್ವರ ಖಂಡ್ರೆ*
ಬೆಂಗಳೂರು: ರಾಜ್ಯದಲ್ಲಿ ಹಸಿರು ಕವಚ ಹೆಚ್ಚಿಸಲು 5 ವರ್ಷದಲ್ಲಿ 25 ಕೋಟಿ ಸಸಿ ನೆಡುವ ಗುರಿಯ ಹಾದಿಯಲ್ಲಿ ಬದ್ಧತೆಯಿಂದ ಸಾಗಿರುವ ಅರಣ್ಯ ಇಲಾಖೆ ಈ ವರ್ಷ ವಿಶ್ವ ಪರಿಸರ ದಿನದ ಅಂಗವಾಗಿ ರಾಜ್ಯವ್ಯಾಪಿ ‘ವನಮಹೋತ್ಸವ’ಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಜೂನ್ 5 ರಂದು ಪರಿಸರ ದಿನಾಚರಣೆಗೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಿರುವ ಹಿನ್ನೆಲೆಯಲ್ಲಿ ಜೂನ್ ಮೂರನೇ ವಾರದಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ‘
ತಾಪಮಾನ ಏರಿಕೆಯು ತೀವ್ರ ಸ್ವರೂಪದಲ್ಲಿ ದಿನದಿಂದ ದಿನೇ ಹೆಚ್ಚಿನ ಪ್ರಮಾಣದಲ್ಲಿ ತಟ್ಟುತ್ತಿದೆ. ಪ್ರಕೃತಿ ಮತ್ತು ಪರಿಸರವನ್ನು ಉಳಿಸುವ ಎಲ್ಲರ ಕರ್ತವ್ಯವನ್ನು ಮನವರಿಕೆ ಮಾಡಿಕೊಡಲು ಜೂ.20 ಅಥವಾ ಜೂ.22 ರಂದು ವಿಶ್ವ ಪರಿಸರ ದಿನವನ್ನು ರಾಜ್ಯವ್ಯಾಪಿ ಸಸಿ ನೆಟ್ಟು ಆಚರಿಸುವ ತೀರ್ಮಾನ ಮಾಡಲಾಗಿದೆ. ಅದಕ್ಕಾಗಿ ಸಿಎಂ ಸಿದ್ದರಾಮಯ್ಯ ಅವರ ಕಾಲಾವಕಾಶ ಕೇಳಲಾಗಿದ್ದು’ ಎಂದು ಸಚಿವ ಈಶ್ವರ್ ಕಂಡ್ರೆ ರವರು ಹೇಳಿದರು.
‘‘ಪ್ರತಿ ವರ್ಷ 5 ಕೋಟಿ ಸಸಿ ನೆಡುವ ಗುರಿ ನಿಗದಿ ಮಾಡಿಕೊಂಡಿದ್ದು, ಕಳೆದ ವರ್ಷ 5.40 ಕೋಟಿ ಸಸಿ ನೆಟ್ಟು ಪೋಷಿಸಲಾಗಿದೆ. ಈ ಬಾರಿ ನಿಗದಿತ ಗುರಿಗಿಂತ ಶೇ.10 ಹೆಚ್ಚು ಸಸಿಗಳನ್ನು ನೆಡಲು ಉದ್ದೇಶಿಸಲಾಗಿದೆ. ದಾಖಲೆಯಲ್ಲಿ ಮಾತ್ರ ಸಸಿ ನೆಡಲಾಗುತ್ತಿದ್ದು, ಅರಣ್ಯೀಕರಣ ಆಗುತ್ತಿಲ್ಲಎಂಬ ಆಪಾದನೆ ಹಿನ್ನೆಲೆಯಲ್ಲಿ ಗ್ರಾಮವಾರು, ಸರ್ವೇ ನಂಬರ್ ವಾರು ಆಡಿಟ್ ಮಾಡಿಸಲಾಗುತ್ತಿದ್ದು, ಶೇ.4 ರಿಂದ ಶೇ.5 ರಷ್ಟು ಸಸಿಗಳು ಹಾಳಾಗಿರುವುದು ಹೊರತುಪಡಿಸಿ ಉಳಿದೆಲ್ಲಾ ಗಿಡಗಳು ಬೆಳೆಯುತ್ತಿವೆ,’’ ಎಂದು ವಿವರಿಸಿದರು.
ಸಿದ್ದಾರ್ಥ
ವರ್ಲ್ಡ್ ಆಫ್ ಮೋಹನ್



