*ಇಂದಿನಿಂದ ಸಂಸತ್ ಅಧಿವೇಶನ ಆರಂಭ*
ದೆಹಲಿ: 18ನೇ ಲೋಕಸಭೆಯ ಮೊದಲ ಅಧಿವೇಶನ ಜೂನ್ 24 ರಿಂದ ಆರಂಭವಾಗಲಿದ್ದು ಜುಲೈ 3ರವರೆಗೆ ನಡೆಯಲಿದೆ. ಲೋಕಸಭೆಗೆ ಅಧಿಕೃತ ಹಂಗಾಮಿ ಸ್ಪೀಕರ್ ಆಗಿ ಭರ್ತೃಹರಿ ಮಹತಾಬ್ ಕಾರ್ಯ ನಿರ್ವಹಿಸಲಿದ್ದಾರೆ.
ಜೂನ್ 26ರಂದು ಲೋಕಸಭಾ ಸ್ಪೀಕರ್ ಚುನಾವಣೆ ನಡೆಯಲಿದೆ. 27ರಂದು ರಾಷ್ಟ್ರಪತಿ ದ್ರೌಪದಿ ಮುರ್ಮ 18ನೇ ಲೋಕಸಭೆ ಜಂಟಿ ಅಧಿವೇಶನ ಕುರಿತು ಮಾತನಾಡಲಿದ್ದಾರೆ. ಎನ್.ಡಿ.ಎ ಮೂರನೇ ಅವಧಿಯ ಸರ್ಕಾರವನ್ನು ಮೊದಲ ಸಂಸತ್ ಅಧಿವೇಶನದಲ್ಲೇ ದುರ್ಬಲಗೊಳಿಸಲು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಸಿದ್ಧತೆ ನಡೆಸಿವೆ. ನೀಟ್ ಯು ಜಿ 2024 ‘ ಪ್ರಶ್ನೆ ಪತ್ರಿಕೆ ಸೋರಿಕೆ, ಯುಜಿಸಿ ನೆಟ್ ಪರೀಕ್ಷಾ ಅಕ್ರಮ ವಿಚಾರಗಳನ್ನು ಮುಂದಿಟ್ಟು ಪ್ರತಿಪಕ್ಷಗಳು ಸದನದಲ್ಲಿ ಬಾರಿ ಸದ್ದು ಮಾಡುವ ಹೆಚ್ಚಿನ ನಿರೀಕ್ಷೆ ಇದೆ. ಕಾಂಗ್ರೆಸ್, ಟಿ.ಎಂ.ಸಿ, ಡಿ.ಎಂ.ಕೆ, ಸೇರಿ ಇಂಡಿಯಾ ಒಕ್ಕೂಟದ ಹಲವು ಪಕ್ಷಗಳು ಇದೇ ವಿಚಾರವನ್ನು ಅಧಿವೇಶನದಲ್ಲಿ ಚರ್ಚಿಸುವುದಾಗಿ ಮಾಹಿತಿ ಮೂಲಗಳು ತಿಳಿಸಿವೆ. ಹಂಗಾಮಿ ಸ್ಪೀಕರ್ ಆಯ್ಕೆ ವಿಚಾರದಲ್ಲೂ ಕಲಾಪದಲ್ಲಿ ಚರ್ಚೆ ಆಗುವ ಸಾಧ್ಯತೆ ಹೆಚ್ಚಿದೆ. ಬೆಲೆ ಏರಿಕೆ, ಹಣದುಬ್ಬರ ಉತ್ತರ ಭಾರತದಲ್ಲಿನ ಬಿಸಿಗಾಳಿ ಮತ್ತು ಪ್ರವಾಹ ಪರಿಸ್ಥಿತಿ ನಿರ್ವಹಣೆ ವಿಚಾರದಲ್ಲಿ ಪ್ರಕೃತಿ ವಿಕೋಪದಿಂದ ಸಾವು ನೋವು ಮೊದಲಾದ ಪ್ರಮುಖ ವಿಷಯಗಳು ಬಗ್ಗೆ ಚರ್ಚೆಯ ಪಟ್ಟಿಯಲ್ಲಿವೆ. ಜುಲೈ 3ಕ್ಕೆ ಮೊದಲ ಅಧಿವೇಶನ ಮುಕ್ತಾಯಗೊಂಡ ನಂತರ ಜುಲೈ 22 ರಿಂದ ಮಳೆಗಾಲದ ಅಧಿವೇಶನ ಪ್ರಾರಂಭವಾಗಲಿದೆ.
ಸಿದ್ದಾರ್ಥ
ವರ್ಲ್ಡ್ ಆಫ್ ಮೋಹನ್



