*ಮಾಧ್ಯಮ ಅಕಾಡೆಮಿಗೆ ಅಧ್ಯಕ್ಷೆಯಾಗಿ ಅಯೋಷಾ ಖಾನಮ್ ನಿಯೋಗ*
ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಖ್ಯಾತ ಹಿರಿಯ ಪತ್ರಕರ್ತೆ ಅಯೋಷಾ ಖಾನಮ್ ಅವರನ್ನು ಅಧ್ಯಕ್ಷರನ್ನಾಗಿ ನಿಯುಕ್ತಿ ಗೊಳಿಸಿದೆ. ಮೊದಲ ಬಾರಿಗೆ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸ್ಥಾನದ ಅವಕಾಶ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯೊಬ್ಬರಿಗೆ ದೊರೆತಿದೆ. ಮಾಧ್ಯಮ ಅಕಾಡೆಮಿಗೆ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ಚರ್ಚೆ ಸಮಯದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್ ಅವರು ಅಯೋಷಾ ಖಾನಮ್ ಹೆಸರನ್ನು ತಿಳಿಸಿದ್ದಾರೆ .
ಅಯೋಷಾ ಖಾನಮ್ ಅವರು ಕಲ್ಯಾಣ ಕರ್ನಾಟಕದ ಕಲ್ಬುರ್ಗಿ ಜಿಲ್ಲೆಯವರು ಆಗಿರುವುದರಿಂದ ಪ್ರಾದೇಶಿಕ ನ್ಯಾಯ, ಸಾಮಾಜಿಕ ನ್ಯಾಯ, ಲಿಂಗ ಸಮಾನತೆಗೆ ಮಾನ್ಯತೆ ನೀಡುವಂತಾಯಿತು ಎಂದು ಕೆ ವಿ ಪ್ರಭಾಕರ್ ಅಭಿಪ್ರಾಯ ಪಟ್ಟಿದ್ದಾರೆ.
ಈ ಅಭಿಪ್ರಾಯಕ್ಕೆ ಆಸ್ತು ಎಂದ ಮುಖ್ಯಮಂತ್ರಿಗಳು ಇತರೆ ಹಲವು ಅರ್ಹರ ಹೆಸರುಗಳ ನಡುವೆ ಈ ಹುದ್ದೆಗೆ ಅಯೋಷಾ ಖಾನಮ್ ಅವರು ಹೆಚ್ಚು ಅರ್ಹರು ಎಂದು ಪರಿಗಣಿಸಿ ಆದೇಶ ಹೊರಡಿಸಲು ಸೂಚಿಸಿದರು.
ಸಿದ್ದಾರ್ಥ
ವರ್ಲ್ಡ್ ಆಫ್ ಮೋಹನ್



