*ಟಿ- ಟ್ವೆಂಟಿ ವರ್ಲ್ಡ್ ಕಪ್ 2024 : ಏಳು ರನ್ ಗಳ ಅಂತರದಲ್ಲಿ ಜಯಭೇರಿ ಸಾಧಿಸಿದ ಭಾರತ ತಂಡ ಚಾಂಪಿಯನ್*
ಬ್ರೀಜ್ ಟೌನ್ : ಐಸಿಸಿ ಟ್ವೆಂಟಿ -20 ವಿಶ್ವ ಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಏಳು ರನ್ ಗಳ ಅಂತರದಲ್ಲಿ ಜಯಭೇರಿ ಸಾಧಿಸಿದ ಭಾರತ ತಂಡ ಚಾಂಪಿಯನ್ ಆಯಿತು.
ಈ ಮೂಲಕ ಭಾರತ ಎರಡನೇ ಬಾರಿ ಕ್ರಿಕೆಟ್ ವಿಶ್ವ ಕಪ್ ಅನ್ನು ಪಡೆಯುವಲ್ಲಿ ಜಯ ಸಾಧಿಸಿತು.
ಭಾರತ ನೀಡಿದ್ದ 176 ರನ್ ಗಳ ಗುರಿ ಬೆನ್ನೆತ್ತಿದ್ದ ದಕ್ಷಿಣ ಆಫ್ರಿಕಾ ವಿರೋಧ ತೋರಿತಾದರು ಕೊನೆ ಕ್ಷಣದಲ್ಲಿ ಎಡವಿತು. ಈ ಮೂಲಕ ವಿಶ್ವ ಕಪ್ ಭಾರತದ ಪಾಲಾಯಿತು. ದಕ್ಷಿಣ ಆಫ್ರಿಕಾ 20 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 168 ರನ್ ಗಳಿಸಲ್ಲಷ್ಟೇ ಸಮರ್ಥವಾಯಿತು. ವಿಶ್ವಕಪ್ ಗೆದ್ದ ಸಂಭ್ರಮದಲ್ಲಿ ಹಾರ್ದಿಕ್ ಪಾಂಡೆ ಕಣ್ಣೀರು ಹಾಕಿದರು. ಭಾರತ ಕ್ರೀಡಾಪಟುಗಳು ಮೈದಾನ ಆವರಣದಲ್ಲಿ ಅಭಿಮಾನಿಗಳಿಂದ ಬಾರಿ ಸಂಭ್ರಮ ಸ್ವೀಕರಿಸಿದರು.
ಟಾಸ್ ಗೆದ್ದ ಭಾರತದ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಮೊದಲ ಓವರ್ ನಲ್ಲಿ ಮೂರು ಬೌಂಡರಿ ಜಯಗಳಿಸಿದ ವಿರಾಟ್ ಕೊಹ್ಲಿ ಉತ್ತಮ ಪ್ರವೃತ್ತಿಯಲ್ಲಿ ಕಂಡುಬಂದರು.
ಆದರೆ ಎರಡನೇ ಓವರ್ ನಲ್ಲಿ ಟೀಮ್ ನಾಯಕ ರೋಹಿತ್ ಶರ್ಮಾ( 9 )ಹಾಗೂ ರಿಷಬ್ ಪಂತ್ (0) ಅವರನ್ನು ಹೊರ ಕಳಿಸಿದ ಎಡಗೈ ಸ್ಪಿನ್ನರ್ ಕೇಶವ ಮಹಾರಾಜ್ ಡಬಲ್ ಆಘಾತ ಸೃಷ್ಟಿಸಿದರು. ಸೂರ್ಯ ಕುಮಾರ್ ಯಾದವ್ (3) ಸಹ ಸೋಲನ್ನು ಕಂಡರು. ಇದರಿಂದಾಗಿ 34 ರನ್ ಗಳಿಸುವಷ್ಟರಲ್ಲಿ ಭಾರತ ಮೂರು ಪ್ರಮುಖ ವಿಕೇಟ್ ಗಳನ್ನು ಕಳೆದುಕೊಂಡಿತು.
31 ಎಸೆತಗಳಲ್ಲಿ 47 ರನ್ ಗಳಿಸಿದ ಅಕ್ಷರ್ ರನ್ ಔಟ್ ಆಗುವ ಮೂಲಕ ಪೆವಿಯಲ್ ನಗೆ ವಾಪಸ್ ಆದರೂ. ಅಕ್ಷರ್ 4 ಸಿಕ್ಸರ್ ಹಾಗೂ ಒಂದು ಬೌಂಡರಿ ಗಳಿಸಿದರು. ಮತ್ತೊಂದಡೆ ದಕ್ಷಿಣ ಆಫ್ರಿಕಾದ ಬೌಲರ್ ಗಳನ್ನು ಪ್ರಭಾವಶಾಲಿಯಾಗಿ ಎದುರಿಸಿದ ವಿರಾಟ್, ಟೂರ್ನಿಯಲ್ಲಿ ಮೊದಲ ಅರ್ಥ ಶತಕ ಜಯಿಸಿದರು. ಅಲ್ಲದೆ ಒಟ್ಟಾರೆಯಾಗಿ ಟಿ ಟ್ವೆಂಟಿ -20 ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 38ನೇ ಅರ್ಥಶತಕ ಜಯ ಸಾಧಿಸಿದರು.
ಅರ್ಥಶತಕದ ಬಲಿಕ ಗಡಸುತನ ಮೂಲಕ ಕೊಹ್ಲಿ ಕಡೆ ಗಮನದ ಸೆಳೆತವಾಯಿತು . ಅಲ್ಲದೆ ಶಿವಂ ದುಬೆ ಅವರೊಂದಿಗೆ ಕೊಹಿಲಿ ಅರ್ಥಶತಕದ ಜೊತೆ ಆಟದಲ್ಲೇ ಭಾಗಿಯಾದರು.
ಸಿದ್ದಾರ್ಥ
ವರ್ಲ್ಡ್ ಆಫ್ ಮೋಹನ್



