*ಕಟ್ಟಡದಿಂದ ಬಿದ್ದು ಪ್ರಖ್ಯಾತ ಕ್ರಿಕೆಟ್ ಕ್ರೀಡಾಪಟು ಡೇವಿಡ್ ಜಾನ್ಸನ್ ಮರಣ*
ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಡೇವಿಡ್ ಜಾನ್ಸನ್ ಅವರು ಗುರುವಾರ ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ್ದಾರೆ.
‘ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯ ಎಸ್ ಎಲ್ ವಿ ಪ್ಯಾರಡೈಸ್ ಅಪಾರ್ಟ್ಮೆಂಟ್ ನ ನಾಲ್ಕನೇ ಮಹಡಿಯಿಂದ ಬಿದ್ದಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ‘ ಎಂದು ಮಾಹಿತಿ ಮೂಲಗಳು ತಿಳಿಯಪಡಿಸಿವೆ .
ಸಿದ್ದಾರ್ಥ
ವರ್ಲ್ಡ್ ಆಫ್ ಮೋಹನ್



