Saturday, April 18, 2026
Google search engine
HomeUncategorizedDr. B K Ravi Honoured..

Dr. B K Ravi Honoured..

*ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ. ಬಿ.ಕೆ.ರವಿ ರವರಿಗೆ ಸನ್ಮಾನ*

ಬೆಂಗಳೂರು.ಜ.20: ಬೆಂಗಳೂರು ಉತ್ತರ ವಿಶ್ವವಿದ್ಯಾಲಯ (ಕೋಲಾರ) ನೂತನ ಕುಲಪತಿಯಾಗಿ ಪ್ರೊ. ಬಿ.ಕೆ ರವಿ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಬೆಂಗಳೂರು ವಿವಿಯ ಸಂವಹನ ವಿಭಾಗದಲ್ಲಿ ಮುಖ್ಯಸ್ಥರಾದ ಡಾ.ಬಿ ಶೈಲಶ್ರೀ ಅವರು ಸನ್ಮಾನಿಸಿ ಗೌರವಿಸಿದರು. ಇದೇ ವೇಳೆ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಪತ್ರಿಕೋದ್ಯಮ ವಿಭಾಗ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಡಾ. ಜೆ ಎಂ ಚಂದುನವರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರೊ. ಬಿ.ಕೆ. ರವಿ ಅವರು ಪತ್ರಿಕೋದ್ಯಮ ವಿಭಾಗದ ಹೆಮ್ಮೆ ಎಂದು ಸಂತಸಪಟ್ಟರು. ಹಲವಾರು ಏಳು ಬೀಳುಗಳ ಪ್ರಸಂಗದ ಘಟನೆಗಳನ್ನು ಮೆಲುಕು ಹಾಕಿದರು.

ಇದೇ ಸಂದರ್ಭದಲ್ಲಿ ಇತಿಹಾಸ ವಿಭಾಗದ ಹಿರಿಯ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರು ಪ್ರೊ. ನಾಗರತ್ನಮ್ಮ, ಸಹಾಯಕ ಪ್ರಾಧ್ಯಾಪಕರು ಡಾ. ವಸುಂದ್ರ ಪ್ರಿಯದರ್ಶಿನಿ ಮಹಾದೇವ್, ಡಾ. ಪ್ರಶಾಂತ ವೇಣುಗೋಪಾಲ್, ಡಾ. ಷಣ್ಮುಖಪ್ಪ ಕೆ, ಡಾ.ಮೋಹನ್ ಕುಮಾರ್, ಬೊಧಕೇತರ ಸಿಬ್ಬಂದಿ, ಅತಿಥಿ ಉಪನ್ಯಾಸಕರು, ಸಂಶೋಧನಾರ್ಥಿಗಳು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

RELATED ARTICLES
- Advertisment -
Google search engine

Most Popular

Jumma Mubarak

Bridge to Bangalore..

We the people…

Recent Comments