Saturday, April 18, 2026
Google search engine
HomeKarnatakaJustice.. At last.

Justice.. At last.

*ಮರಕುಂಬಿ ಗ್ರಾಮದ ದಲಿತರ ಮೇಲೆ ಸವರ್ಣಿಯರ ದೌರ್ಜನ್ಯ : 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ*

ಕೊಪ್ಪಳ : ಗಂಗಾವತಿ ತಾಲ್ಲೂಕಿನ ಮರಕುಂಬಿ ಗ್ರಾಮದಲ್ಲಿ ಅಸ್ಪೃಶ್ಯರ ಮೇಲಿನ ದೌರ್ಜನ್ಯ  ಪ್ರಕರಣದ 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ  ಮತ್ತು ಮೂವರಿಗೆ  ಐದು ವರ್ಷ ಶಿಕ್ಷೆ  ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗುರುವಾರ ಮಹತ್ವ ಆದೇಶವನ್ನು  ಹೊರಡಿಸಿದೆ.

ಅಸ್ಪೃಶ್ಯತೆ ಆಚರಣೆಯು,  ದಲಿತರ ಮೇಲಿನ ದೌರ್ಜನ್ಯ ಕಾರಣ ಈ ಪ್ರಕರಣ ದೇಶದ ಜನತೆಯ ಗಮನ ಸೆಳೆದಿತ್ತು. ಗಲಭೆಗೆ ಕಾರಣವಾದ  101 ಜನರ ವಿರುದ್ಧದ ಆರೋಪ ಸಾಬೀತು ಆಗಿದ್ದು, 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 5,000 ರೂ ದಂಡ ವಿಧಿಸಿದೆ .  ಇನ್ನುಳಿದ ಮೂವರು ಅಪರಾಧಿಗಳಿಗೆ   ತಲಾ 2000 ರೂ ದಂಡ ಹಾಗೂ ಐದು ವರ್ಷ ಶಿಕ್ಷೆ  ವಿಧಿಸಲಾಗಿದೆ. ಪ್ರಕರಣ ವಿಚಾರಣೆ ನಡೆಸಿದ  ಜಿಲ್ಲಾ ನ್ಯಾಯಾಧೀಶ  ಚಂದ್ರಶೇಖರ್ ಸಿ  ಅಕ್ಟೋಬರ್ 21ರಂದು  101 ಆರೋಪಿಗಳನ್ನು ಅಪರಾಧಿಗಳೆಂದು ಘೋಷಿಸಿದ್ದರು.

ಗಂಗಾವತಿ ತಾಲೂಕಿನ  ಮರಕುಂಬಿಯಲ್ಲಿ 2014  ಅ. 28 ರಂದು ದಲಿತರು ಮತ್ತು ಮೇಲ್ವರ್ಗ ಜನಾಂಗದ ನಡುವೆ ಜಾತಿ ಸಂಘರ್ಷಣೆ ನಡೆದಿತ್ತು. ಗಂಗಾವತಿ ನಗರದ ಶಿವೆ ಚಿತ್ರಮಂದಿರದಲ್ಲಿ  ‘ ಪವರ್ ‘ಸಿನಿಮಾ ವೀಕ್ಷಣೆಗೆ ತೆರಳಿದ್ದ  ಮರಕುಂಬಿ ಗ್ರಾಮದ ಸವರ್ಣೀಯ ಮಂಜುನಾಥ ಹಾಗೂ ಇತರರ ನಡುವೆ  ಗಲಾಟೆ ನಡೆದಿತ್ತು. ಇದೇ ವಿಚಾರಕ್ಕೆ  ಗ್ರಾಮದಲ್ಲಿ ಸವರ್ಣಿಯರು   ದಲಿತರ ಮೇಲೆ  ಹಲ್ಲೆ ನಡೆಸಿ, ನಾಲ್ಕು ಗುಡಿಸಲಿಗೆ  ಬೆಂಕಿ ಹಚ್ಚಿದ್ದರು, ಈ ಕುರಿತು 117 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪೈಕಿ ಕೆಲವರು ಮರಣ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

*ಸಿದ್ದಾರ್ಥ*
*ವರ್ಲ್ಡ್ ಆಫ್ ಮೋಹನ್*

LEAVE A REPLY

Please enter your comment!
Please enter your name here

RELATED ARTICLES
- Advertisment -
Google search engine

Most Popular

Jumma Mubarak

Bridge to Bangalore..

We the people…

Recent Comments