Saturday, April 18, 2026
Google search engine
HomeKarnatakaPress Day Celebrations..

Press Day Celebrations..

*ಇಂದು ಪತ್ರಿಕಾ ದಿನಾಚರಣೆ : ಕೋಲಾರ ಜಿಲ್ಲಾ ಪತ್ರಕರ್ತರ ಸಂಘ*

*ಕೋಲಾರ* : ಕೋಲಾರ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ  ಪತ್ರಿಕಾ ದಿನಾಚರಣೆಯನ್ನು ಪತ್ರಕರ್ತರ ಭವನ, ಅಂತರಗಂಗೆ ರಸ್ತೆ, ಕೋಲಾರದಲ್ಲಿ ಜುಲೈ 1ರಂದು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪತ್ರಕರ್ತರ ಸಂಘದ ಅಧ್ಯಕ್ಷರಾದ  ಬಿ.ವಿ.ಗೋಪಿನಾಥ್  ಪ್ರಾಸ್ತವಿಕ  ನುಡಿಗಳಾನ್ನಾಡಿದರು ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕುಲಪತಿಗಳಾದ ಪ್ರೊ. ನಿರಂಜನ್  ವಾನಳ್ಳಿ ರವರು ಪ್ರಧಾನ ಉಪನ್ಯಾಸಕರಾಗಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ  ಕೆ ಎಸ್ ಗಣೇಶ್, KUWJ ನಿಂದ ವಿ ಮುನಿರಾಜ್ ರವರು ಮುಖ್ಯ ಅತಿಥಿಗಳಾಗಿ  ಪತ್ರಿಕಾ ದಿನಾಚರಣೆಯಲ್ಲಿ ಭಾಗವಹಿಸಿದ್ದರು.

*ಪ್ರೊ. ನಿರಂಜನ್  ವಾನಳ್ಳಿ*
ಕಾರ್ಯಕ್ರಮವನ್ನು ಕುರಿತು  ಕೆಲವೊಂದು ಹಿತ ನುಡಿಗಳಾನ್ನಾಡಿದರು. ” ವೈದ್ಯಲೋಕದಲ್ಲಿ  ವೈದ್ಯರು  ರೋಗಿಗೆ ಹೇಗೆ ಔಷಧಿಯನ್ನು ನೀಡಬಲ್ಲರೋ, ಉತ್ತಮ  ಸಮಾಜ ನಿರ್ಮಾಣವಾಗಬೇಕಾದರೆ  ಪತ್ರಕರ್ತರ  ಪಾತ್ರ ಹೆಚ್ಚಾಗಿರುತ್ತದೆ  ಎಂದು ಹೇಳಿದರು. ಅಗೆಯೇ ಕನ್ನಡದ ಮೊದಲ ಪತ್ರಿಕೆ ” ಮಂಗಳೂರು ಸಮಾಚಾರ್ ” ಬಗ್ಗೆ ಸರಳವಾಗಿ ಹಿನ್ನಲೆಯನ್ನು ತಿಳಿಸಿದರು. ರಾಜ್ಯದಲ್ಲಿ ಪತ್ರಿಕೋದ್ಯಮ ಕೋರ್ಸ್ ಅನ್ನು ಓದುವ ವಿದ್ಯಾರ್ಥಿಗಳು ತೀರಾ ಕಡಿಮೆ ಇದ್ದಾರೆ. ಇರುವ ವಿದ್ಯಾರ್ಥಿಗಳಲ್ಲಿ ಗುಣಮಟ್ಟದ ಭಾಷಾ ಕೌಶಲ್ಯವಿಲ್ಲ ಎಂದು ತಿಳಿಸುವುದರ ಮೂಲಕ ಮುಂದಿನ ದಿನಗಳಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಡಿಪ್ಲೋಮಾ ಕೋರ್ಸ್ ಅನ್ನು  ಪರಿಚಯಿಸಲಾಗುವುದೆಂದು  ಕಾರ್ಯಕ್ರಮದಲ್ಲಿ ಆಶ್ವಾಸನೆ ನೀಡಿದರು.

ಪತ್ರಿಕಾ ದಿನಾಚರಣೆ ಪ್ರಯುಕ್ತ ಪ್ರತಿಭಾವಂತ ಪತ್ರಕರ್ತರ ಮಕ್ಕಳಿಗೆ – ಎಸ್. ಎಸ್. ಎಲ್. ಸಿ ,   ಪಿ. ಯು. ಸಿ,  ಪದವಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿದರು.

ಪತ್ರಿಕೋದ್ಯಮ ಕೋರ್ಸ್ ಇನ್ನಷ್ಟು  ಪರಿಚಯ ವಾಗುವಂತೆ  ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕುಲಪತಿಗಳಾದ   ಪ್ರೊ. ನಿರಂಜನ್  ವಾನಳ್ಳಿ ರವರ ಸಮ್ಮುಖದಲ್ಲಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘವು ಯಶಸ್ವಿಯಾಗಿ ಪತ್ರಿಕಾ ದಿನಾಚರಣೆಯನ್ನು  ಸಂಭ್ರಮದಿಂದ ಆಚರಿಸಲಾಯಿತು.

ಸಿದ್ದಾರ್ಥ
ವರ್ಲ್ಡ್ ಆಫ್ ಮೋಹನ್

LEAVE A REPLY

Please enter your comment!
Please enter your name here

RELATED ARTICLES
- Advertisment -
Google search engine

Most Popular

Jumma Mubarak

Bridge to Bangalore..

We the people…

Recent Comments