Saturday, April 18, 2026
Google search engine
HomeKarnatakaPower TV Stops..

Power TV Stops..

*ಪ್ರಸಾರ ನಿಲ್ಲಿಸಿದ ಪವರ್ ಟಿವಿ : 3 ವರ್ಷಗಳ ಹಿಂದೆ ಪರವಾನಗಿ  ಮುಕ್ತಾಯ – ಕೇಂದ್ರದಿಂದ ಹೈಕೋರ್ಟಿಗೆ ಮಾಹಿತಿ*

ಬೆಂಗಳೂರು: ಕರ್ನಾಟಕ ಹೈ ಕೋರ್ಟ್ ಜೂನ್ 25 ಮಂಗಳವಾರ ನೀಡಿದ ಮಧ್ಯಂತರ ಆದೇಶದ ಎರಡು ದಿನಗಳ ಬಳಿಕ ಜೂನ್ 27 ಗುರುವಾರದಂದು ಕನ್ನಡ ಸುದ್ದಿ  ಚಾನೆಲ್ ಪವರ್ ಟಿವಿ  ತನ್ನ ಪ್ರಸಾರ ಮಾಡುವುದನ್ನು ನಿಲ್ಲಿಸಿದೆ. ಸುದ್ದಿ ಚಾನೆಲ್ ಪ್ರಸಾರಕ್ಕೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ನೀಡುವ ಲೈಸನ್ಸ್ ಹೊಂದಿಲ್ಲ. ಹೀಗಾಗಿ  ತಕ್ಷಣದಿಂದಲೇ  ಜಾರಿಗೆ ಬರುವಂತೆ ಚಾನಲ್ ಪ್ರಸಾರವನ್ನು  ನಿಲ್ಲಿಸಲು ಪವರ್ ಟಿವಿಗೆ  ಹೈಕೋರ್ಟ್ ಸೂಚನೆಗಳನ್ನು ನೀಡಿದೆ.

ಚಾನಲ್ ವಿರುದ್ಧ ಜೆಡಿಎಸ್ ಮಾಜಿ ಎಂ. ಎಲ್. ಸಿH. M ರಮೇಶ್ ಗೌಡ ಹಾಗೂ  ಕೇಂದ್ರ ವಲಯ ಐಜಿಪಿ ಬಿಆರ್  ರವಿಕಾಂತೇಗೌಡ  ಅವರು ಎರಡು ಪ್ರತ್ಯೇಕ ಕೇಸುಗಳನ್ನು  ದಾಖಲಿಸಿದ್ದರು. ಚಾನಲ್ ಅನ್ನು ನಿರ್ವಹಿಸುವ  ಪವರ್ ಟಿವಿಯು  ಸುದ್ದಿ ಚಾನೆಲ್  ಪ್ರಸಾರಕ್ಕೆ ಬೇಕಾದ ಲೈಸನ್ಸ್ ಅನ್ನು ಹೊಂದಿಲ್ಲ ಎಂಬ ವಿಚಾರ ತಿಳಿದ ಬಳಿಕ ನ್ಯಾಯಾಲಯವು  ಪ್ರಸಾರ ನಿಲ್ಲಿಸುವಂತೆ ಏಪ್ರಿಲ್ ನಲ್ಲಿ  ಆದೇಶವನ್ನು ಹೊರಡಿಸಿತ್ತು. ಇದನ್ನು  ಚಾನಲ್  ಕಾನೂನು ಬಾಹಿರವಾಗಿ ಪ್ರಸಾರವನ್ನು  ಮುಂದುವರಿಸಿದರು ಎಂಬ ಮಾಹಿತಿಯನ್ನು  ಅರ್ಜಿದಾರರು  ಕೋರ್ಟ್ ಗಮನಕ್ಕೆ  ತಂದಿದ್ದರು.

ದೂರುದಾರರು, ಚಾನಲ್ ಅದರ ಪಾಲುದಾರರು ಮತ್ತು ಭಾರತ ಸರ್ಕಾರದ ಪರವಾಗಿ ವಕೀಲರು ವಾದ- ಪ್ರತಿವಾದ ಆಲಿಸಿದ ನಂತರ  ಕರ್ನಾಟಕ ಹೈಕೋರ್ಟ್  ಏಕ ಸದಸ್ಯ ಪವರ್ ಟಿವಿ ಪ್ರಸಾರವನ್ನು  ನಿಲ್ಲಿಸುವಂತೆ  ಮಂಗಳವಾರ ಆದೇಶವನ್ನು  ನೀಡಲಾಗಿತ್ತು.  ಇದರ ಹಿನ್ನೆಲೆಯಲ್ಲಿ ಗುರುವಾರ ಪವರ್ ಟಿವಿ  ತನ್ನ ಸುದ್ದಿ ಪ್ರಸಾರವನ್ನು  ಸಂಪೂರ್ಣವಾಗಿ ನಿಲ್ಲಿಸಿದ್ದು’ ಸತ್ಯಮೇವ ಜಯತೆ ಎಂಬ ಸಂದೇಶವನ್ನು ಖಾಲಿ ಪರದೆ ಮೇಲೆ ಪ್ರಸಾರ ಮಾಡಲು ಆರಂಭಿಸಿದೆ.

ಸಿದ್ದಾರ್ಥ
ವರ್ಲ್ಡ್ ಆಫ್ ಮೋಹನ್

LEAVE A REPLY

Please enter your comment!
Please enter your name here

RELATED ARTICLES
- Advertisment -
Google search engine

Most Popular

Jumma Mubarak

Bridge to Bangalore..

We the people…

Recent Comments